আবহাওয়া আইপিএল-2025 টাকা পয়সা পশ্চিমবঙ্গ ভারত ব্যবসা চাকরি রাশিফল স্বাস্থ্য প্রযুক্তি লাইফস্টাইল শেয়ার বাজার মিউচুয়াল ফান্ড আধ্যাত্মিক অন্যান্য
---Advertisement---

ಆ.2 ರಂದು ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ : ಡ್ರೆಸ್‌ ಕೋಡ್‌ ಹೇಗಿರಬೇಕು ? ಮೂಗುತಿ, ಮಂಗಳ ಸೂತ್ರಕ್ಕೆ ಅವಕಾಶ ಇರುತ್ತಾ ? | Written Test for PC Recruitment

Published on: July 30, 2026
---Advertisement---

ಆ.2 ರಂದು ಪಿಸಿ ನೇಮಕಾತಿಗೆ ಲಿಖಿತ ಪರೀಕ್ಷೆ : ಡ್ರೆಸ್‌ ಕೋಡ್‌ ಹೇಗಿರಬೇಕು ? ಮೂಗುತಿ, ಮಂಗಳ ಸೂತ್ರಕ್ಕೆ ಅವಕಾಶ ಇರುತ್ತಾ ? | Written Test for PC Recruitment on Aug 2 |

ಕಲಬುರಗಿ,ಜು,29 : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿನ ಸಿವಿಲ್ ಪೊಲೀಸ್ ಪೇದೆ ಹುದ್ದೆ ನೇಮಕಾತಿಗೆ ಬರುವ ಆಗಸ್ಟ್ 2 ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗಳಲ್ಲಿ ಮಹಿಳಾ ಅಭ್ಯರ್ಥಿಗಳು ಮೂಗುತಿ ,ಮಂಗಳ ಸೂತ್ರ ಧರಿಸಲು ಅವಕಾಶ ಇದೆಯಾ ? ಪೂರ್ಣ ಮಾಹಿತಿ ಇಲ್ಲಿದೆ.

ಆ.2 ರಂದು ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ : ಡ್ರೆಸ್‌ ಕೋಡ್‌ ಹೇಗಿರಬೇಕು ? ಮೂಗುತಿ, ಮಂಗಳ ಸೂತ್ರಕ್ಕೆ ಅವಕಾಶ ಇರುತ್ತಾ ? | Written Test for PC Recruitment

ಕಲಬುರಗಿ ನಗರದಾದ್ಯಂತ ಸುಮಾರು 40 ಪರೀಕ್ಷಾ ಕೇಂದ್ರದಲ್ಲಿ ಲಿಖಿತ ಪರೀಕ್ಷೆ ನಡೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ವ್ಯಾಪಕ ಕಟ್ಟೆಚ್ಚರ ವಹಿಸಲು ಕಲಬುರಗಿ ಡಿಸಿ ಸೂಚಿಸಿದ್ದಾರೆ. ಯಾವುದೇ ಅಕ್ರಮಕ್ಕೆ ಅವಕಾಶ ನೀಡದೆ ಶಾಂತಿಯುತ, ನ್ಯಾಯಸಮ್ಮತವಾಗಿ ಪರೀಕ್ಷೆ ನಡೆಸಬೇಕೆಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಕಲಬುರಗಿ ಡಿ.ಸಿ. ಇಕ್ರಂ ಶರೀಫ್ ಖಡಕ್ ಸೂಚನೆ ನೀಡಿದ್ದಾರೆ.

ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ಅಂದು ಬೆಳಗಿನ ಅವಧಿಯ ಪರೀಕ್ಷೆಗೆ 15,702 ಮತ್ತು ಮಧ್ಯಾಹ್ನ ಅವಧಿಯ ಪರೀಕ್ಷೆಗೆ 14,370 ಜನ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.

Read more : 30 children are sick after eating Avalakki in Morarji school | ಮೊರಾರ್ಜಿ ಶಾಲೆಯಲ್ಲಿ ಅವಲಕ್ಕಿ ತಿಂದು 30 ಮಕ್ಕಳು ಅಸ್ವಸ್ಥ

ಮೂಲಭೂತ ಸೌಲಭ್ಯ ಕಲ್ಪಿಸಲು ಸೂಚನೆ

ಪರೀಕ್ಷೆಗೆ ಮುನ್ನವೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಕೊಠಡಿಯಲ್ಲಿನ ಗಾಳಿ ಬೆಳಕು, ವಿದ್ಯುತ್ ವ್ಯವಸ್ಥೆ, ಮೇಜಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಲಭ್ಯ ಇರುವುದನು ಖಾತ್ರಿಪಡಿಸಿಕೊಳ್ಳಬೇಕು. ಒಟ್ಟಿನಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಯಾವುದೇ ರೀತಿಯ ಅನಾನುಕೂಲವಾಗದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಇನ್ನು ಪರೀಕ್ಷೆ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಪ್ರತಿ ಕೇಂದ್ರಕ್ಕೆ ವೀಕ್ಷಕರು, ಜಾಗೃತ ದಳದ ಸದಸ್ಯರನ್ನು ನಿಯೋಜಿಸಿದೆ. ಪ್ರಶ್ನೆ ಪತ್ರಿಕೆ ಸಾಗಾಟಕ್ಕೆ ಪಾಲಕರನ್ನು ನಿಯೋಜಿಸಿದೆ. ಬಿಗಿ ಭದ್ರತೆಯಲ್ಲಿ ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳ ಸಾಗಾಟ ಮಾಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಡಿ.ಸಿ. ನಿರ್ದೇಶನ ನೀಡಿದರು.

ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನ ನಿಷೇಧ

ಮೋಬೈಲ್, ಬ್ಲೂಟೂಥ್, ಮೈಕ್ರೋಚಿಪ್, ಗಡಿಯಾರ, ಇಯರ್ ಫೋನ್, ಪೇಜರ್, ಕ್ಯಾಲಕುಲೇಟರ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಪಠ್ಯ ಸಾಮಗ್ರಿಗಳು ಪರೀಕ್ಷೆ ಕೇಂದ್ರಕ್ಕೆ ತೆಗೆದುಕೊಂಡು ಹೋಗುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ ಕೇಂದ್ರದ ಸುತ್ತ 200 ಮೀಟರ್ ಪ್ರದೇಶ ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದು ಎಂದು ಡಿ.ಸಿ. ಇಕ್ರಂ ಶರೀಫ್ ತಿಳಿಸಿದರು.

ಸಿ.ಸಿ.ಟಿ.ವಿ ಕಣ್ಗಾವಲಿನಲ್ಲಿ ಪರೀಕ್ಷೆ

ದೇಶದಾದ್ಯಂತ ಪರೀಕ್ಷೆಯಲ್ಲಿನ ಅಕ್ರಮ ಘಟನಗೆಳು ನಮ್ಮುಂದಿವೆ. ನೇಮಕಾತಿ ಬಯಸುವ ಅಭ್ಯರ್ಥಿಗಳು ತುಂಬಾ ಕಷ್ಟಪಟ್ಟು ಅಧ್ಯಯನ ಮಾಡಿ ಪರೀಕ್ಷೆಗೆ ಸಿದ್ದರಾಗಿರುತ್ತಾರೆ. ಹೀಗಾಗಿ ಪರೀಕ್ಷೆಯಲ್ಲಿ ಯಾವುದೇ ಹಂತದಲ್ಲಿ ನಕಲು, ಅಕ್ರಮ ಅವರಲ್ಲಿ ಹತಾಶೆ ಭಾವನೆ ಉಂಟು ಮಾಡುತ್ತದೆ. ಹೀಗಾಗಿ ಯಾವುದೇ ಅಕ್ರಮಕ್ಕೆ ಅವಕಾಶ ನೀಡಬಾರದು. ಪ್ರಶ್ನೆ ಪತ್ರಿಕೆ ತೆರೆಯುವುದರಿಂದ ಹಿಡಿದು ಪರೀಕ್ಷೆ ಪ್ರಕ್ರಿಯೆ ಸಂಪೂರ್ಣ ಮುಗಿಯುವವರೆಗೆ ಸಿ.ಟಿ.ಟಿ.ವಿ ಕಣ್ಗಾವಲಿನಲ್ಲಿ ನಡೆಯಬೇಕು. ವೆಬ್‌ಕಾಸ್ಟಿಂಗ್ ಮೂಲಕ ಪ್ರತಿ ಕೇಂದ್ರದ ಮೇಲೆ ಸರ್ಕಾರ ನಿಗಾ ವಹಿಸಿದೆ. ಯಾವುದೇ ಅಹಿತಕರ ಘಟನೆ ನಡೆದಲ್ಲಿ ಸಂಬಂಧಪಟ್ಟ ಕೇಂದ್ರದ ಮುಖ್ಯಸ್ಥರೆ ಹೊಣೆಗಾರರಾಗಲಿದ್ದಾರೆ ಎಂಬುದನ್ನು ಅಧಿಕಾರಿಗಳು ಮರೆಯಬಾರದು ಎಂದು ಡಿ.ಸಿ. ಎಚ್ಚರಿಕೆಯ ಮಾತುಗಳನ್ನಾಡಿದರು.

ಅಕ್ರಮದಲ್ಲಿ ಭಾಗಿಯಾದರೆ ಸಜೆ

ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆ-2024ರ ಪ್ರಕಾರ ಯಾವುದೇ ವ್ಯಕ್ತಿ ನ್ಯಾಯಸಮ್ಮತ ಪರೀಕ್ಷೆ ನಡೆಸುವಲ್ಲಿ ನಿಷ್ಕಾಳಜಿ ಮತ್ತು ಅಕ್ರಮಕ್ಕೆ ಸಹಕಾರ ನೀಡಿದಲ್ಲಿ 5 ವರ್ಷ ಶಿಕ್ಷೆಗೆ ಅವಕಾಶವಿದೆ. ಇತ್ತೀಚಿನ ನೀಟ್ ಪರೀಕ್ಷೆ ಹಿನ್ನೆಲೆಯಲ್ಲಿ ಸದರಿ ಕಾಯ್ದೆಗೆ ತಿದ್ದುಪಡಿ ತಂದು ಆರೋಪಿತರಿಗೆ 10 ವರ್ಷದ ವರೆಗೆ ಗರಿಷ್ಠ ಶಿಕ್ಷೆ ನೀಡುವ ಚಿಂತನೆ ಸರ್ಕಾರದ ಮಟ್ಟದಲ್ಲಿ ಇದ್ದು, ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕೆಂದು ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ ತಿಳಿಸಿದರು.

ಮೂಗುತಿ, ಮಂಗಳ ಸೂತ್ರಕ್ಕೆ ಅವಕಾಶ

ಯಾವುದೇ ಅಭ್ಯರ್ಥಿಯ ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ಪೊಲೀಸ್ ಸಿಬ್ಬಂದಿ ಫ್ರಿಸ್ಕಿಂಗ್ ಮಾಡಬೇಕು. ಪ್ರತಿ ಅಭ್ಯರ್ಥಿಯ ಎ.ಐ ಆಧಾರಿತ ಮುಖ ಚಹರೆ ತೋರಿಸಿಯೆ ಕೇಂದ್ರದೊಳಗೆ ಪ್ರವೇಶಿಸಬೇಕು. ಇನ್ನು ಅಭ್ಯರ್ಥಿಗಳು ಉದ್ದು ತೋಳಗಳ ಡ್ರೆಸ್ ಧರಿಸಿ ಪರೀಕ್ಷೆಗೆ ಹಾಜರಾಗಬಾರದು. ಕಿವಿ, ತಲೆ, ಮುಖ ಮುಚ್ಚುವಂತಹ ಯಾವುದು ಉಡುಪುಗಳನ್ನು ಧರಿಸಬಾರದು. ಮೂಗುತಿ, ಮಂಗಳಸೂತ್ರ ಹೊರತುಪಡಿಸಿ ಯಾವುದೇ ಆಭರಣ, ಲೋಹದ ವಸ್ತುಗಳನ್ನು ಅಭ್ಯರ್ಥಿಗಳನ್ನು ಧರಿಸುವಂತಿಲ್ಲ. ಶೂ ಹಾಕಿಕೊಳ್ಳುವಂತಿಲ್ಲ. ಆದರೆ ಕಡಿಮೆ ಹಿಮ್ಮಡಿಯಿರುವ ಸ್ಯಾಂಡಲ್ ಗಳನ್ನು ಧರಿಸಬಹುದಾಗಿದ್ದು, ಪ್ರವೇಶ ಪತ್ರದಲ್ಲಿ ನೀಡಿದ ಎಲ್ಲಾ ಸೂಚನೆಗಳನ್ನು ಪಾಲಿಸಬೇಕೆಂದು ಡ್ರೆಸ್ ಕೋಡ್ ಕುರಿತು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ವಿವರವಾಗಿ ಮಾಹಿತಿ ನೀಡಿದರು.

ಸಭೆಯಲ್ಲಿ ಎಸ್.ಪಿ. ಅಡ್ಡೂರು ಶ್ರೀನಿವಾಸುಲು, ಡಿ.ಸಿ.ಪಿ ಶಾಲು, ಶಾಲಾ ಶಿಕ್ಷಣ (ಪದವಿ ಪೂರ್ವ) ಉಪನಿರ್ದೇಶಕ ದೇವನಗೌಡ ಪಾಟೀಲ ಸೇರಿದಂತೆ ಪರೀಕ್ಷೆ ಕೇಂದ್ರದ ಮುಖ್ಯಸ್ಥರು ಇದ್ದರು.

Join WhatsApp

Join Now

Join Telegram

Join Now

Leave a Comment