আবহাওয়া আইপিএল-2025 টাকা পয়সা পশ্চিমবঙ্গ ভারত ব্যবসা চাকরি রাশিফল স্বাস্থ্য প্রযুক্তি লাইফস্টাইল শেয়ার বাজার মিউচুয়াল ফান্ড আধ্যাত্মিক অন্যান্য
---Advertisement---

ಬರಗಾಲ ಘೋಷಣೆಗೆ ಆಗ್ರಹಿಸಿ ಕಲಬುರಗಿ ಬಂದ್‌ : ಬಸ್‌, ಆಟೋ ಸಂಚಾರ ಸ್ಥಗಿತ | kalaburagi bandh

Published on: August 20, 2026
ಬರಗಾಲ ಘೋಷಣೆಗೆ ಆಗ್ರಹಿಸಿ ಕಲಬುರಗಿ ಬಂದ್‌ : ಬಸ್‌, ಆಟೋ ಸಂಚಾರ ಸ್ಥಗಿತ | kalaburagi bandh
---Advertisement---

ಕಲಬುರಗಿ ಆ. 20: ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಆಗ್ರಹಿಸಿ ವಿವಿಧ ರೈತಪರ ಸಂಘಟನೆಗಳು ಇಂದು ಕಲ್ಬುರ್ಗಿ ಬಂದ್ (kalaburagi bandh) ನಡೆಸುತ್ತಿವೆ. ಬಸ್‌, ಆಟೋ ಸಂಚಾರ ಸ್ಥಗಿತಗೊಂಡಿದೆ.

ಬಂದ್ ಅಂಗವಾಗಿ ನೂರಾರು ಪ್ರತಿಭಟನಾಕಾರರು ಬೆಳ್ಳಂ ಬೆಳಗ್ಗೆಯಿಂದ ಕಲ್ಬುರ್ಗಿಯ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಶುರು ಮಾಡಿದ್ದಾರೆ.

ಇದರ ಪರಿಣಾಮ ಕೇಂದ್ರ ಬಸ್ ನಿಲ್ದಾಣದಿಂದ ತೆರಳುವ ಬಸ್ ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸದಾ ಜನರಿಂದ ಗೀಜಗೂಡುತ್ತಿದ್ದ ಕಲ್ಬುರ್ಗಿಯ ಕೇಂದ್ರ ಬಸ್ ನಿಲ್ದಾಣ ಇಂದು ಬಸ್ ಗಳು ಇಲ್ಲದೆ ಹಾಗೂ ಪಯಣಿಕರು ಇಲ್ಲದೆ ಬಿಕೋ ಎನ್ನುವಂತಿತ್ತು.

kalaburagi bandh | ಕಲಬುರಗಿ ಬಂದ್‌

ಕಲ್ಬುರ್ಗಿ ಬಂದ್ ನಿಮಿತ್ಯ ಕೇಂದ್ರ ಬಸ್ ನಿಲ್ದಾಣದ ಸುತ್ತಮುತ್ತಲಿನ ಅಂಗಡಿ ಮುಗ್ಗಟ್ಟುಗಳು ಮುಚ್ಚಲ್ಪಟ್ಟಿವೆ. ಆಟೋ ಸೇರಿದಂತೆ ಖಾಸಗಿ ವಾಹನಗಳ ಸಂಚಾರವು ಸಹ ವಿರಳವಾಗಿದೆ.

ವಿವಿಧ ರೈತ ಪರ ಸಂಘಟನೆಗಳ ಬೆಂಬಲ

ರಾಜ್ಯ ರೈತಸಂಘ,ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಸಂಯುಕ್ತ ಹೋರಾಟ ಸಮಿತಿ ಸೇರಿ ವಿವಿಧ ರೈತಪರ, ಕನ್ನಡಪರ, ದಲಿತ ಸಂಘಟನೆಗಳು ಜಂಟಿಯಾಗಿ ಇಂದಿನ ಕಲ್ಬುರ್ಗಿ ಬಗ್ಗೆ ಕರೆ ನೀಡಿವೆ.

ಕೂಡಲೇ ಬರಪೀಡಿತ ಜಿಲ್ಲೆ ಎಂದು ಘೋಷಿಸಿ

ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ತೀವ್ರ ಖುಷಿತ ಕಂಡಿದೆ. ವಾಡಿಕೆ ಗಿಂತ ತೀರ ಕಡಿಮೆ ಮಳೆಯಾದ ಕಾರಣ ಮುಂಗಾರಿನಲ್ಲಿ ಬಿತ್ತುವ ತೊಗರಿ ಹೆಸರು ಉದ್ದು ಎಳ್ಳು ಸೂರ್ಯಕಾಂತಿ ಬೆಳೆಗಳೆಲ್ಲವೂ ಹಾನಿಗಿಡಾಗಿದೆ. ಹಾಗಾಗಿ ಸರ್ಕಾರ ಕಲ್ಬುರ್ಗಿ ಜಿಲ್ಲೆಯನ್ನ ಈ ಕೂಡಲೇ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಪ್ರತಿಭಟನಾ ನಿರತ ರೈತ ಮುಖಂಡರು ಆಗ್ರಹಿಸಿದರು.

Read this also : ನಾಗರ ಪಂಚಮಿ ಹಿನ್ನಲೆ, ಪರಂಪರೆ ಮತ್ತು ನಂಬಿಕೆಯ ಒಳನೋಟ | Special story of Nagapanchami festival

ಬರಗಾಲದಿಂದ ಬೆಳೆ ಹಾನಿಗಳು ಕಾದ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು, ಬೆಳೆ ವಿಮೆ ವಿತರಣೆಯಲ್ಲಿ ಕಲ್ಬುರ್ಗಿ ಜಿಲ್ಲೆಯಲ್ಲಿ ವ್ಯಾಪಕ ತಾರತಮ್ಯ ಮಾಡಲಾಗಿದೆ. ಕೆಲವೊಂದು ಪಂಚಾಯತ್ ಗಳಿಗೆ ಉತ್ತಮ ಪರಿಹಾರ ಹಣ ಜಮೆಯಾದರೆ, ಇನ್ನು ಕೆಲವು ಪಂಚಾಯತಿಗಳ ವ್ಯಾಪ್ತಿಯಲ್ಲಿನ ರೈತರಿಗೆ ಹತ್ತು ಹದಿನೈದು ರೂಪಾಯಿ ಬೆಳೆ ವಿಮೆ ಪರಿಹಾರ ಹಣ ಜಮೆಯಾಗಿದೆ. ಸರ್ಕಾರ ರೈತರಿಗೆ ಇನ್ಸೂರೆನ್ಸ್ ಹಣ ಭಿಕ್ಷೆಯ ರೂಪದಲ್ಲಿ ನೀಡುತ್ತಿದೆ ಎಂದು ಪ್ರತಿಭಟನಾ ನಿರತರ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ವ್ಯಾಪಕ ಬೆಂಬಲ

ಕಲಬುರಗಿ ಬಂದ್ ಕರೆಗೆ ವರ್ತಕರ ಸಂಘ, ಎಪಿಎಂಸಿ ವರ್ತಕರು, ವ್ಯಾಪಾರಿಗಳ ಸೇರಿ ಹಲವು ಸಂಘಗಳು ಬೆಂಬಲ ವ್ಯಕ್ತಪಡಿಸಿವೆ.

ನಗರೇಶ್ವರ ದಿಂದ ಪ್ರತಿಭಟನೆ

ಕಲ್ಬುರ್ಗಿ ಬಂದ್ ಅಂಗವಾಗಿ ರೈತ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಬೆಳಗ್ಗೆ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದಲ್ಲದೆ ನೆಹರು ಗಂಜಿನಲ್ಲಿರುವ ನಗರೇಶ್ವರ ಶಾಲಾ ಮೈದಾನದಿಂದ ಡಿಸಿ ಕಚೇರಿ ವರೆಗೂ ಬೃಹತ್ ಪ್ರತಿಭಟನೆ ನಡೆಸಿದರು.

Read this also : ದೇಶದಲ್ಲೇ ಕಲಬುರಗಿಗೆ ಅತಿ ಹೆಚ್ಚು ಬೆಳೆ ವಿಮೆ ಬಿಡುಗಡೆ | Highest crop insurance issued to kalaburagi

ಪ್ರತಿಭಟನೆಯಲ್ಲಿ ವಿವಿಧ ರೈತ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಪಾಲ್ಗೊಂಡು ರೈತರ ಬೆಳಿಕಿಗೆ ಬೆಂಬಲ ವ್ಯಕ್ತಪಡಿಸಿದರು.

ಕಾಂಗ್ರೆಸ್, ಬಿಜೆಪಿ ವಿರುದ್ಧ ಆಕ್ರೋಶ

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡರು, ಮಳೆ ಕೈಕೊಟ್ಟಿದ್ದರಿಂದ ಕಲ್ಬುರ್ಗಿ ಜಿಲ್ಲೆಯ ರೈತರು ಅಕ್ಷರ ಸಹ ಕಂಗಾಲಾಗಿದ್ದಾರೆ. ವಿಧಾನಸಭೆಯಾಗಿದೆ ಇಂತಹ ಮಹತ್ವದ ವಿಚಾರ ಚರ್ಚೆ ಮಾಡಬೇಕಾದ, ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರು ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಅಧಿವೇಶನಪೂರ್ತಿ ಸಚಿವ ನಾಗೇಂದ್ರ ಹೆಸರಿನಲ್ಲಿ ಬಲಿ ಪಡೆಯುತ್ತಿದ್ದಾರೆ ಎಂದು ಪ್ರತಿಭಟನಾ ನಿರತರ ಮುಖಂಡರು ಕಿಡಿ ಕಾರಿದರು.

Read this also : ಬರಪೀಡಿತ ಪ್ರದೇಶಗಳಿಗೆ ಸಚಿವ ಪ್ರೀಯಾಂಕ್ ಖರ್ಗೆ ಭೇಟಿ : ಬೆಳೆ ಹಾನಿ ಖುದ್ದು ಪರಿಶೀಲನೆ | Home minister Priyank Kharge visit drought Area

ರಾಜ್ಯ ಸರ್ಕಾರ ಕೂಡಲೇ ಕಲ್ಬುರ್ಗಿ ಜಿಲ್ಲೆಯನ್ನ ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂಪಾಯಿಯಂತೆ ಪರಿಹಾರ ನೀಡಬೇಕು ಎಂದು ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರು ಒತ್ತಾಯಿಸಿದರು. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತರೊಂದಿಗೆ ಮತ್ತಷ್ಟು ಉಗ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.

ರೈತ ಸಂಘಟನೆಗಳಿಂದ ಕಲ್ಬುರ್ಗಿ ಬಂದ್ ಕರೆ ಹಿನ್ನೆಲೆಯಲ್ಲಿ ಕಲ್ಬುರ್ಗಿ ನಗರದ ಪ್ರಮುಖ ಸ್ಥಳಗಳಲ್ಲಿ ವ್ಯಾಪಕ ಪೊಲೀಸ್ ಕಟ್ಟಾಚರ ವಹಿಸಲಾಗಿತ್ತು.

Join WhatsApp

Join Now

Join Telegram

Join Now

Leave a Comment