আবহাওয়া আইপিএল-2025 টাকা পয়সা পশ্চিমবঙ্গ ভারত ব্যবসা চাকরি রাশিফল স্বাস্থ্য প্রযুক্তি লাইফস্টাইল শেয়ার বাজার মিউচুয়াল ফান্ড আধ্যাত্মিক অন্যান্য
---Advertisement---

ಜಿಲೆಟಿನ್ ಸ್ಪೋಟ ತಂದೆ ಮಗಳು ಬಲಿ, ಪತ್ನಿ , ಮಗ ಸೇರಿ ನಾಲ್ವರ ಸ್ಥಿತಿ ಗಂಭೀರ | Gelatin blast father, daughter death

Published on: August 11, 2026
Gelatin blast father, daughter death
---Advertisement---

ಕಲಬುರಗಿ ಆ.11:- ಜಿಲೆಟಿನ್ ಸ್ಪೋಟ ತಂದೆ ಮಗಳು ಬಲಿ, ಪತ್ನಿ , ಮಗ ಸೇರಿ ನಾಲ್ವರ ಸ್ಥಿತಿ ಗಂಭೀರವಾದ ಘಟನೆ ಕಲಬುರಗಿ ಜಿಲ್ಲೆಯಲ್ಲಿಂದು ನಡೆದಿದೆ.‌ Gelatin blast father, daughter death. ಹೆಂಡತಿಯ ಮೇಲಿನ ಧ್ವೇಷದಿಂದ ಮೈಗೆ ಜಿಲೆಟಿನ್ ಕಟ್ಟಿಕೊಂಡು ಮನೆಯೊಳಗೆ ಹೋಗಿ ಸ್ಪೋಟಿಸಿಕೊಂಡ ಪರಿಣಾಮ ಇಬ್ಬರು ಬಲಿಯಾಗಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Gelatin blast father, daughter death

ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಮಟಕಿ ತಾಂಡಾದ ನಿವಾಸಿ ಶೇವಾಲಾಲ್ ಎನ್ನುವ 50 ವರ್ಷದ ವ್ಯಕ್ತಿ. ಬಾವಿ ತೋಡುವ ಬ್ಲಾಸ್ಟಿಂಗ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದ. ಈತನ ಪತ್ನಿ ಹಾಗೂ ಮಕ್ಕಳು ಪೂನಾದಲ್ಲಿ ವಾಸವಾಗಿದ್ದರು. ವಾರದ ಹಿಂದಷ್ಟೇ ಪತ್ನಿ ಮಟಕಿ ತಾಂಡಾಗೆ ಬಂದಿದ್ದ ವಿಚಾರ ತಿಳಿದು ಶೇವಾಲಾಲ್ ಕೂಡ ಊರಿಗೆ ಬಂದಿದ್ದ ಎನ್ನಲಾಗಿದೆ.

ಪತ್ನಿಯ ಬಗ್ಗೆ ಅನುಮಾನ

ಪತ್ನಿಯ ಶೀಲದ ಬಗ್ಗೆ ಶೇವಾಲಾಲ್ ಅನುಮಾನ ಹೊಂದಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ನಿನ್ನೆ ಜಗಳ ಸಹ ನಡೆದಿತ್ತು. ಆದ್ರೆ ಇಂದು ಬೆಳಿಗ್ಗೆ 8-30 ರ ಸುಮಾರಿಗೆ ತನ್ನ ಇಡೀ ಕುಟುಂಬ ನಾಶ ಮಾಡುವ ಉದ್ದೇಶದಿಂದ ತನ್ನ ಮೈಗೆ ತಾನೇ ಜಿಲಿಟಿನ್ ಕಡ್ಡಿಗಳನ್ನು ಕಟ್ಟಿಕೊಂಡು, ಹೆಂಡತಿ ಮಕ್ಕಳು ವಾಸ ಇರುವ ಕೋಣೆಯೊಳಗೆ ಹೋಗಿ ಸ್ಪೋಟಿಸಿಕೊಂಡಿದ್ದಾನೆ.

Read this also : ಬೆಳೆ ವಿಮೆ ಪರಿಹಾರ ಹಂಚಿಕೆಯಲ್ಲಿ ದೇಶದಲ್ಲೇ ಕಲಬುರಗಿ ಟಾಪ್ 2 | Crop insurance distribution Kalaburagi top 2

ತಂದೆ ಮಗಳು ಬಲಿ, ಪತ್ನಿ , ಮಗ ಸೇರಿ ನಾಲ್ವರ ಸ್ಥಿತಿ ಗಂಭೀರ

ಘಟನೆಯಲ್ಲಿ ಶೇವಾಲಾಲ್ ಹಾಗೂ ಆತನ 16 ವರ್ಷದ ಮಗಳು ವೀರಾಬಾಯಿ ಮೃತಪಟ್ಟಿದ್ದಾರೆ. ಶೇವಾಲಾಲ್ ನ ಪತ್ನಿ 39 ವರ್ಷದ ಸವಿತಾ, ಶೇವಾಲಾಲನ ಮಗ 21 ವರ್ಷದ ರಿತೀಷ್, ಶೇವಾಲಾಲನ ಅಣ್ಣನ ಹೆಂಡತಿ ಸುರೇಖಾ, ಶೇವಾಲಾಲ ಅಣ್ಣನ ಮಗು 10 ವರ್ಷದ ವಿವೇಕ್. ಸ್ಪೋಟದಿಂದ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಲಬುರಗಿ ಟ್ರಾಮಾ ಕೇರ್ ಸೆಂಟರಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಎಸ್ಪಿ ಅಡ್ಡೂರು ಶ್ರೀನಿವಾಸಲು ಭೇಟಿ

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟಕ್ಕೆ ಬಳಸಲಾದ ವಸ್ತುಗಳ ಮೂಲ, ಘಟನೆಗೆ ನಿಖರ ಕಾರಣ ಹಾಗೂ ಕುಟುಂಬದೊಳಗಿನ ವಿವಾದದ ಹಿನ್ನೆಲೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶೇವಾಲಾಲ್ ಬ್ಲಾಸ್ಟಿಂಗ್ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲೇ ಈ ಸ್ಫೋಟಕ ವಸ್ತುಗಳು ಆತನಿಗೆ ಹೇಗೆ ಲಭ್ಯವಾದವು ಎಂಬ ಬಗ್ಗೆಯೂ ತನಿಖೆ ನಡೆಯಬೇಕಿದೆ. ಮಟಕಿ ತಾಂಡಾದಲ್ಲಿ ನಡೆದ ಈ ಸ್ಫೋಟ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಪತ್ನಿಯ ಮೇಲಿನ ಅನುಮಾನವೇ ಈ ದುರ್ಘಟನೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಸದ್ಯ ಪೊಲೀಸರು ಘಟನೆಯ ಪ್ರತಿಯೊಂದು ಆಯಾಮವನ್ನೂ ಪರಿಶೀಲಿಸುತ್ತಿದ್ದಾರೆ.

Join WhatsApp

Join Now

Join Telegram

Join Now

Leave a Comment