আবহাওয়া আইপিএল-2025 টাকা পয়সা পশ্চিমবঙ্গ ভারত ব্যবসা চাকরি রাশিফল স্বাস্থ্য প্রযুক্তি লাইফস্টাইল শেয়ার বাজার মিউচুয়াল ফান্ড আধ্যাত্মিক অন্যান্য
---Advertisement---

ಆಳಂದ ಶಾಸಕ ಬಿ.ಆರ್ ಪಾಟೀಲ್ ರಾಜೀನಾಮೆ|ಎಐಸಿಸಿ ಅಧ್ಯಕ್ಷರ ತವರಲ್ಲೇ ಅಸಮಾಧಾನ ಸ್ಪೋಟ

Published on: August 6, 2026
aland-mla-br-patil-resignation
---Advertisement---

ಕಲಬುರಗಿ ಆ.6: ಆಳಂದ ಶಾಸಕ ಬಿ.ಆರ್ ಪಾಟೀಲ್ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಎಐಸಿಸಿ ಅಧ್ಯಕ್ಷರ ತವರಲ್ಲೇ ಅಸಮಾಧಾನ ಸ್ಪೋಟ ಗೊಂಡಂತಾಗಿದೆ.

ಸಚಿವ ಸಂಪುಟ ವಿಸ್ತರಣೆಯ ನಂತರ ರಾಜ್ಯದ ಕಾಂಗ್ರೆಸ್ ಸರಕಾರದಲ್ಲಿ ಅತೃಪ್ತಿ, ಅಸಮಾಧಾನ ತೀವ್ರಗೊಂಡಿದೆ. ಹಲವು ಶಾಸಕರು ಬಹಿರಂಗವಾಗಿ ಅತೃಪ್ತಿ ಹೊರಹಾಕುತ್ತಿರುವ ಬೆನ್ನಲ್ಲೇ ಇತ್ತ ಕಲಬುರಗಿ ಜಿಲ್ಲೆ ಆಳಂದ ಶಾಸಕ ಬಿ.ಆರ್ ಪಾಟೀಲ್ ರಾಜೀನಾಮೆ ನೀಡಿದ್ದಾರೆ. ಹೌದು ! ಶಾಸಕ ಬಿ.ಆರ್ ಪಾಟೀಲ್, ತಮ್ಮ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗದ ಶಾಸಕರಲ್ಲಿ ಅತೃಪ್ತಿ, ಅಸಮಾಧಾನ ಬಹಿರಂಗವಾಗಿ ಸ್ಪೋಟವಾಗುತ್ತಿದೆ. ಆ ಸಾಲಿಗೆ ಆಳಂದ ಶಾಸಕ ಬಿ.ಆರ್ ಪಾಟೀಲ್ ಸಹ ಸೇರಿದ್ದಾರೆ.
ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರು, ಸಿಎಂ ಹೇಳಿದಂತೆ ನನ್ನ ರಾಜೀನಾಮೆ ಅಂಗೀಕರಿಸಲಿ ಅಂತ ಸಿಎಂ ಡಿ.ಕೆ ಶಿವಕುಮಾರ ಅವರಿಗೆ ಸವಾಲು ಹಾಕಿದ್ದಾರೆ.

ಬಿ.ಆರ್ ಪಾಟೀಲರಿಗೆ ಸಿಗದ ಮಂತ್ರಿಗಿರಿ

ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಆಳಂದ ಶಾಸಕ ಬಿ.ಆರ್ ಪಾಟೀಲ್ ಅವರಿಗೂ ಅವಕಾಶ ಸಿಕ್ಕಿಲ್ಲ. ನಾಲ್ಕು ಬಾರಿ ಶಾಸಕರಾಗಿರುವ ಬಿ.ಆರ್ ಪಾಟೀಲ್ ಹಿರಿಯ ಶಾಸಕರ ಸಾಲಿನಲ್ಲಿರುವವರು. ಮೇಲಾಗಿ ಮಾಜಿ ಸಿಎಂ ಸಿದ್ರಾಮಯ್ಯ ಅವರ ಖಾಸಾ ಗೆಳೆಯ.

ಇನ್ನೊಂದೆಡೆ ಸ್ಪೀಕರ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಅವರಿಗೆ ಸ್ವತಃ ಮಾಜಿ ಸಿಎಂ ಸಿದ್ರಾಮಯ್ಯ ಶಿಫಾರಸ್ಸು ಮಾಡಿದ್ದರಂತೆ. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಅವಕಾಶ ನೀಡಿಲ್ಲ. ಇದು ಬಿ.ಆರ್ ಪಾಟೀಲ್ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.

Read this also : ಅತೃಪ್ತ ಶಾಸಕರಿಗೆ ಸಿಎಂ ಶಾಕ್ ! ರಾಜೀನಾಮೆ ನೀಡಿದರೆ ತಕ್ಷಣ ಅಂಗೀಕಾರ | CM warns unsatisfied MLA’s

ಎಐಸಿಸಿ ಅಧ್ಯಕ್ಷರ ತವರಲ್ಲೇ ಅಸಮಾಧಾನ

ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಆಳಂದ ಶಾಸಕ ಬಿ.ಆರ್ ಪಾಟೀಲ್ ರಾಜೀನಾಮೆ ನೀಡಿರುವುದರಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರಲ್ಲೇ ಅಸಮಾಧಾನ ತೀವ್ರಗೊಂಡಂತಾಗಿದೆ. ದೇಶದ ಕಾಂಗ್ರೆಸ್ ನಿಭಾಯಿಸುವ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಸ್ವಂತ ಜಿಲ್ಲೆಯಲ್ಲಿನ ಪಕ್ಷದ ನಾಯಕರ ಅಸಮಾಧಾನ ಯಾವ ರೀತಿ ಸರಿಪಡಿಸುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಆಳಂದ ಶಾಸಕ ಬಿ.ಆರ್ ಪಾಟೀಲ್ ರಾಜೀನಾಮೆ | ಎಐಸಿಸಿ ಅಧ್ಯಕ್ಷರ ತವರಲ್ಲೇ ಅಸಮಾಧಾನ ಸ್ಪೋಟ

Join WhatsApp

Join Now

Join Telegram

Join Now

Leave a Comment