আবহাওয়া আইপিএল-2025 টাকা পয়সা পশ্চিমবঙ্গ ভারত ব্যবসা চাকরি রাশিফল স্বাস্থ্য প্রযুক্তি লাইফস্টাইল শেয়ার বাজার মিউচুয়াল ফান্ড আধ্যাত্মিক অন্যান্য
---Advertisement---

ಮುಧೋಳ ಶಾಸಕನಿಗೆ ಮಂತ್ರಿ ಸ್ಥಾನ ತಪ್ಪಿದ್ದಕ್ಕೆ ಕಲಬುರಗಿಯಲ್ಲಿ ಪ್ರತಿಭಟನೆ | Protest in Kalaburagi for Minister seat

Published on: August 4, 2026
Protest in Kalaburagi for Minister seat
---Advertisement---

ಮುಧೋಳ ಶಾಸಕನಿಗೆ ಮಂತ್ರಿ ಸ್ಥಾನ ತಪ್ಪಿದ್ದಕ್ಕೆ ಕಲಬುರಗಿಯಲ್ಲಿ ಪ್ರತಿಭಟನೆ | Protest in Kalaburagi for Minister seat | ಕಲಬುರಗಿ ಆ 4:- ರಾಜ್ಯ ಸಚಿವ ಸಂಪುಟ ವಿಸ್ತರಣೆ ನಂತರ ಹಲವೆಡೆ ಅಸಮಾಧಾನ, ಆಕ್ರೋಶ ತೋವ್ರಗೊಂಡಿವೆ. ಸರಕಾರದ ವಿರುದ್ದ ಸ್ವ ಪಕ್ಷದ ಕಾರ್ಯಕರ್ತರಿಂದಲೇ ಪ್ರತಿಭಟನೆಗಳೂ ಸಹ ನಡೆಯುತ್ತಿವೆ.


ಅದೇ ರೀತಿ ಬಾಗಲಕೋಟೆ ಜಿಲ್ಲೆಯ ಮುಧೋಳ ಮತಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಅಬಕಾರಿ ಸಚಿವ ಆರ್.ಬಿ ತಿಮ್ಮಾಪೂರ ಅವರಿಗೆ ಮಂತ್ರಿಸ್ಥಾನ ಕೈ ತಪ್ಪಿದ್ದಕ್ಕೆ ಕಲಬುರಗಿಯಲ್ಲಿ ಪ್ರತಿಭಟನೆ ನಡೆದಿದೆ.

ಮುಧೋಳ ಶಾಸಕನಿಗೆ ಮಂತ್ರಿ ಸ್ಥಾನ ತಪ್ಪಿದ್ದಕ್ಕೆ ಕಲಬುರಗಿಯಲ್ಲಿ ಪ್ರತಿಭಟನೆ | Protest in Kalaburagi for Minister seat

ಮಾದಿಗ ಸಮುದಾಯದವರಿಂದ ಕಲಬುರಗಿ ಡಿಸಿ ಕಛೇರಿ ಮುಂದೆ ಪ್ರತಿಭಟನೆ ನಡೆದಿದೆ. ಮಾದಿಗ ಸಮುದಾಯದ ಮುಖಂಡರೂ ಮಾಜಿ ಸಚಿವರಾದ ಆರ್.ಬಿ ತಿಮ್ಮಾಪೂರ ಅವರಿಗೆ ಮಂತ್ರಿ ಸ್ಥಾನ ನೀಡಬೇಕಿತ್ತು.

ಆರ್.ಬಿ ತಿಮ್ಮಾಪೂರ ಅವರು ಕಳೆದ ಬಾರಿ ಸಿದ್ರಾಮಯ್ಯ ಸರಕಾರದಲ್ಲಿ ನೀಡಲಾಗಿದ್ದ ಅಬಕಾರಿ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ದಕ್ಷ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ. ಎಲ್ಲಿಯೂ ಕಿಂಚಿತ್ತೂ ಕಪ್ಪು ಚುಕ್ಕೆ ಹಚ್ಚಿಕೊಳ್ಳದೇ ಅತ್ಯಂತ ಪ್ರಾಮಾಣಿಕತೆಯಿಂದ ದುಡಿದಿದ್ದಾರೆ.

Read this also : ಶಾಸಕ ಅಜಯಸಿಂಗ್ ಗೆ ಒಲಿದ ಮಂತ್ರಿ ಸ್ಥಾನ : ತಾಳ್ಮೆಗೆ ಸಿಕ್ಕ ಜಯ ಎಂದು ಬೆಂಬಲಿಗರ ಹರ್ಷೋದ್ಘಾರ | ಮಗನ ತಬ್ಬಿಕೊಂಡು ಕಂಬನಿ ಮಿಡಿದ ಅಜಯಸಿಂಗ್ ತಾಯಿ | Dr Ajaysingh gets Ministerial berth

ಮುಖ್ಯಮಂತ್ರಿ ವಿರುದ್ದ ದಿಕ್ಕಾರದ ಘೋಷಣೆ

ಅಂತಹ ಆರ್.ಬಿ ತಿಮ್ಮಾಪೂರ ಅವರನ್ನು ನಿರ್ಲಕ್ಷಿಸುವ ಮೂಲಕ ಕಾಂಗ್ರೆಸ್ ಪಕ್ಷ, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹಾಗೂ ಹೈಕಮಾಂಡ್ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಸಿಎಂ ಹಾಗೂ ಕಾಂಗ್ರೆಸ್ ವಿರುದ್ದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ದ ದಿಕ್ಕಾರದ ಘೋಷಣೆಗಳು ಮೊಳಗಿದವು. ಪ್ರತಿಭಟನಾಕಾರರು ಟಯರ್ ಗೆ ಬೆಂಕಿ ಹಚ್ಚಿ, ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಮಾದಿಗ ಸಮುದಾಯದ ಹಲವಾರು ಮುಖಂಡರು, ಆರ್.ಬಿ ತಿಮ್ಮಾಪೂರ ಅವರ ಅಭಿಮಾನಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು‌.

Join WhatsApp

Join Now

Join Telegram

Join Now

Leave a Comment