আবহাওয়া আইপিএল-2025 টাকা পয়সা পশ্চিমবঙ্গ ভারত ব্যবসা চাকরি রাশিফল স্বাস্থ্য প্রযুক্তি লাইফস্টাইল শেয়ার বাজার মিউচুয়াল ফান্ড আধ্যাত্মিক অন্যান্য
---Advertisement---

ಶಾಸಕ ಅಜಯಸಿಂಗ್ ಗೆ ಒಲಿದ ಮಂತ್ರಿ ಸ್ಥಾನ : ತಾಳ್ಮೆಗೆ ಸಿಕ್ಕ ಜಯ ಎಂದು ಬೆಂಬಲಿಗರ ಹರ್ಷೋದ್ಘಾರ | ಮಗನ ತಬ್ಬಿಕೊಂಡು ಕಂಬನಿ ಮಿಡಿದ ಅಜಯಸಿಂಗ್ ತಾಯಿ | Dr Ajaysingh gets Ministerial berth

Published on: August 3, 2026
---Advertisement---

ಶಾಸಕ ಅಜಯಸಿಂಗ್ ಗೆ ಒಲಿದ ಮಂತ್ರಿ ಸ್ಥಾನ : ತಾಳ್ಮೆಗೆ ಸಿಕ್ಕ ಜಯ ಎಂದು ಬೆಂಬಲಿಗರ ಹರ್ಷೋದ್ಘಾರ | ಮಗನ ತಬ್ಬಿಕೊಂಡು ಕಂಬನಿ ಮಿಡಿದ ಅಜಯಸಿಂಗ್ ತಾಯಿ | Dr Ajaysingh gets Ministerial berth

ಬೆಂಗಳೂರು :- ಕಡೆಗೂ ತಾಳ್ಮೆಗೆ ಜಯ ಸಿಕ್ಕಿದೆ. ಪದೇ ಪದೇ ಮಂತ್ರಿ ಸ್ಥಾನ ಕೈ ತಪ್ಪಿದಾಗಲೂ ತುಟಿ ಪಿಟಕ್ ಎನ್ನದೇ ನೋವು ಎದೆಯೊಳಗೆ ಇಟ್ಟುಕೊಳ್ಳುತ್ತಿದ್ದ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಅವರ ತಾಳ್ಮೆಗೆ ಕಡೆಗೂ ಜಯ ಸಿಕ್ಕಿದೆ. ಅಜಯಸಿಂಗ್ ಅವರಿಗೆ ಈ ಬಾರಿ ಮಂತ್ರಿ ಸ್ಥಾನ ಒಲಿದು ಬಂದಿದೆ.

ಹೌದು ! ಜೇವರ್ಗಿ ಶಾಸಕ. ಹ್ಯಾಟ್ರಿಕ್ ಹೀರೋ. ಮಾಜಿ ಸಿಎಂ ಧರ್ಮಸಿಂಗ್ ರ ಅವರ ಪುತ್ರ ಡಾ. ಅಜಯಸಿಂಗ್ ಗೆ ಈ ಬಾರಿ ಮಂತ್ರಿ ಸ್ಥಾನ ಒಲಿದು ಬಂದಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಸಚಿವ ಸಂಪುಟದಲ್ಲಿ ಮೊದಲ ಬಾರಿಗೆ ಮಂತ್ರಿಯಾಗುವ ಅವಕಾಶ ಧರ್ಮಸಿಂಗ್ ಪುತ್ರ, ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಅವರಿಗೆ ಒಲಿದು ಬಂದಿದೆ.

ಶಾಸಕ ಅಜಯಸಿಂಗ್ ಗೆ ಒಲಿದ ಮಂತ್ರಿ ಸ್ಥಾನ : ತಾಳ್ಮೆಗೆ ಸಿಕ್ಕ ಜಯ ಎಂದು ಬೆಂಬಲಿಗರ ಹರ್ಷೋದ್ಘಾರ | ಮಗನ ತಬ್ಬಿಕೊಂಡು ಕಂಬನಿ ಮಿಡಿದ ಅಜಯಸಿಂಗ್ ತಾಯಿ | Dr Ajaysingh gets Ministerial berth

ಕಾಂಗ್ರೆಸ್ ಹೈಕಮಾಂಡ್ ಪ್ರಕಟಿಸಿರುವ ನೂತನ ಸಚಿವರ ಪಟ್ಟಿಯಲ್ಲಿ 13 ನೇ ಹೆಸರು ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಅವರದ್ದಾಗಿದೆ.

Read this also : ವಿದ್ಯಾರ್ಥಿಗಳಿಗೆ ಸಿಹಿಸುದ್ದಿ! 2026ರ ಶೈಕ್ಷಣಿಕ ಸಾಲಕ್ಕೆ ಅರ್ಜಿ ಆರಂಭ appplication invitation for scholarship 2026

ಅಜಯಸಿಂಗ್ ಮನೆಯಲ್ಲಿ ಸಂಭ್ರಮ

ಅಜಯಸಿಂಗ್ ಅವರಿಗೆ ಮಂತ್ರಿ ಸ್ಥಾನ ಸಿಗುವ ವಿಚಾರ ಖಚಿತವಾಗುತ್ತಿದ್ದಂತೆಯೇ ಬೆಂಗಳೂರಿನ ಅಜಯಸಿಂಗ್ ಅವರ ಮನೆಯಲ್ಲಿ ಸಂಭ್ರಮ ಸಡಗರ ಮುಗಿಲು ಮುಟ್ಟಿದೆ. ಕಲಬುರಗಿ, ಜೇವರ್ಗಿಯಿಂದ ಆಗಮಿಸಿದ ಅವರ ಬೆಂಬಲಿಗರು, ಅಭಿಮಾನಿಗಳು ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಕುಣಿದು ಕುಪ್ಪಳಿಸಿದರು. ಅಜಯಸಿಂಗ್ ಹಾಗೂ ಅವರ ತಂದೆ ಧರ್ಮಸಿಂಗ್ ಪರ ಜಯಘೋಷಗಳು ಮುಗಿಲು ಮುಟ್ಟಿದವು.

ಮಗನ ತಬ್ಬಿಕೊಂಡು ಕಣ್ಣೀರಿಟ್ಟ ಅಜಯಸಿಂಗ್ ತಾಯಿ

ಪತಿ ಧರ್ಮಸಿಂಗ್ ನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರೂ ರಾಜಕೀಯ ಸಹವಾಸದಲ್ಲಿ ಕಿಂಚಿತ್ತೂ ಮೂಗು ತೂರಿಸದವಲ್ಲ ಅವರ ಪತ್ನಿ ಪ್ರಭಾವತಿ ಧರ್ಮಸಿಂಗ್. ಆದರೆ ಈಗ ಮಗ ಅಜಯಸಿಂಗ್ ಗೆ ಮಂತ್ರಿ ಸ್ಥಾನ ಸಿಕ್ಕ ವಿಚಾರ ತಿಳಿದು ಮಗನನ್ನು ತಬ್ಬಿಕೊಂಡು ಅಕ್ಷರಶಃ ಕಣ್ಣಿರು ಸುರಿಸಿದರು. ಮಗನನ್ನು ಅಪ್ಪಿ ಭಾವುಕರಾದರು. ತಾಯಿ ಮಗನ ಈ ಭಾವುಕ ಕ್ಷಣಕ್ಕೆ ಬೆಂಗಳೂರಿನ ಅಜಯಸಿಂಗ್ ಮನೆಯಲ್ಲಿದ್ದ ಅದೆಷ್ಟೋ ಅಭಿಮಾನಿಗಳು, ಬೆಂಬಲುಗರು ಸಾಕ್ಷಿಯಾದರು.

ತಾಯಿ ಮಗನ ಈ ಭಾವುಕ ಕ್ಷಣ ಕಂಡು ಅಲ್ಲಿ ಸೇರಿದ ನೂರಾರು ಅಭಿಮಾನಿಗಳ ಕಣ್ಣುಗಳು ಸಹ ತೇವವಾಗಿದ್ದವು. ಅಜಯಸಿಂಗ್ ತಾಯಿಯ ಪಾದ ಮುಟ್ಟಿ ನಮಸ್ಕರಿಸಿದ್ದಲ್ಲದೇ ತಾಯಿಯನ್ನು ಸಂತೈಸಲು, ಸಮಾಧಾನಿಸಲು ಪ್ರಯತ್ನಿಸುತ್ತಿರುವುದು ಕಂಡು ಬಂತು. ಜೊತೆಗೆ ತಾಯಿ ಪ್ರಭಾವತಿ ಹಾಗೂ ಪುತ್ರ ಅಜಯಸಿಂಗ್ ಇಬ್ಬರೂ ಆಗಾಗ ಅಲ್ಲಿ ನೇತು ಹಾಕಲಾಗಿದ್ದ ದಿವಂಗತ ಧರ್ಮಸಿಂಗ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸುತ್ತಿರುವುದು ವ್ಯಾಪಕವಾಗಿ ಕಂಡು ಬಂತು‌‌. ಈ ಭಾವುಕ ಕ್ಷಣಕ್ಕೆ ಕಲಬುರಗಿಯಿಂದ ತೆರಳಿದ ನೂರಾರು ಅಭಿಮಾನಿಗಳು ಸಾಕ್ಷಿಯಾದರು.

ತಾಳ್ಮೆಗೆ ಸಿಕ್ಕ ಜಯ ಎಂದು ಬೆಂಬಲಿಗರ ಹರ್ಷೋದ್ಘಾರ

ಹೌದು ! ಹಾಗೆ ನೋಡಿದರೆ ಅಜಯಸಿಂಗ್ ಅವರಿಗೆ ಯಾವತ್ತೋ ಮಂತ್ರಿ ಸ್ಥಾನ ಸಿಗಬೇಕುತ್ತು. ಸಿದ್ರಾಮಯ್ಯ ಸಂಪುಟದಲ್ಲೇ ಅಜಯಸಿಂಗ್ ಮಂತ್ರಿಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮಂತ್ರಿ ಸ್ಥಾನ ಕೈ ತಪ್ಪುತ್ತಲೇ ಇತ್ತು. ಆದರೂ ಕಿಂಚಿತ್ತೂ ಅಪಸ್ವರ ಎತ್ತದಿವರಲ್ಲ ಡಾ. ಅಜಯಸಿಂಗ್. ಮುಂದಿನ ದಿನಗಳಲ್ಲಿ ನನಗೆ ಮಂತ್ರಿ ಸ್ಥಾನ ಸಿಗುತ್ತೆ. ನಮ್ಮ ನಾಯಕರು ಅವಕಾಶ ಮಾಡಿ ಕೊಡ್ತಾರೆ. ಜೀವನದಲ್ಲಿ ತಾಳ್ಮೆ ಮುಖ್ಯ. ನುಧಾನವಾಗಿ ಆದ್ರೂ ಗಟ್ಟಿಯಾಗಿ ಬೆಳೆಯಬೇಕು ಎನ್ನುವ ಮಾತು ಪದೇ ಪದೇ ಹೇಳುತ್ತಿದ್ದರು. ಇದನ್ನು ಅಜಯಸಿಂಗ್ ಅವರ ಬಾಯಿಯಿಂದ ಹತ್ತಾರು ಬಾರಿ ಕೇಳಿದ್ದ ಅವರ ಬೆಂಬಲಿಗರು, ಈಗ ಅಜಯಸಿಂಗ್ ಅವರ ತಾಳ್ಮೆಗೆ ಜಯ ಸಿಕ್ಕಿದೆ. ಈ ಮಂತ್ರಿ ಸ್ಥಾನ ಅವರ ತಾಳ್ಮೆಗೆ ಸಿಕ್ಕ ಜಯ ಎನ್ನುತ್ತಿದ್ದಾರೆ‌‌.

ಜೇವರ್ಗಿ , ಕಲಬುರಗಿಯಲ್ಲಿ ಸಂಭ್ರಮ

ಅಜಯಸಿಂಗ್ ಅವರಿಗೆ ಈ ಬಾರಿ ಮಂತ್ರಿ ಸ್ಥಾನ ಸಿಕ್ಕಿದ್ದಕ್ಕಾಗಿ ಕಲಬುರಗಿ, ಜೇವರ್ಗಿಯಲ್ಲಿ ಅಭಿಮಾನಿಗಳಲ್ಲಿ ಸಂತಸ, ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಬೆಂಬಲಿಗರು ಕುಣಿದು ಕುಪ್ಪಳಿಸುತ್ತಿದ್ದಾರೆ.

Read this also : ಬಿರುಗಾಳಿ ಸಹಿತ ಸುರಿಯಲಿದೆ ಭಾರೀ ಮಳೆ ! ಸಾರ್ವಜನಿಕರೇ ಎಚ್ಚರ !! Heavy rain will fall with the storm!

ಯೋಗೇಶ ಉಮ್ಮರಗಿ ಸಂತಸ

ಅಜಯಸಿಂಗ್ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದಕ್ಕೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಉಪಾಧ್ಯಕ್ಷ ಯೋಗೇಶ ಉಮ್ಮರಗಿ ಸಂತಸ ವ್ಯಕ್ತಪಡಿಸಿದ್ದಾರೆ.

ರಾಜಕೀಯದಲ್ಲಿ ಸಣ್ಣ ಕಪ್ಪು ಚುಕ್ಕೆಯೂ ಇಲ್ಲದಂತೆ ರಾಜಕೀಯ ಮಾಡಿದವರು ಮಾಜಿ ಸಿಎಂ ದಿವಂಗತ ಧರ್ಮಸಿಂಗ್ ಅವರು. ಅವರ ಪುತ್ರರಾಗಿ ಡಾ. ಅಜಯಸಿಂಗ್ ಅವರೂ ಸಹ ಧರ್ಮಸಿಂಗ್ ಅವರಂತೆ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ, ಸದಾ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಅವರಿಗೆ ಈ ಬಾರಿ ಮಂತ್ರಿ ಸ್ಥಾನ ಸಿಕ್ಕಿರುವುದು ಜೇವರ್ಗಿ ಮಾತ್ರವಲ್ಲ, ಕಲಬುರಗಿ ಹಾಗೂ ರಾಜ್ಯದ ಜನರಿಗೆ ಸಂತಸ ಮೂಡಿಸಿದೆ. ಯಾವುದೇ ಮಂತ್ರಿ ಸ್ಥಾನ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಡಾ. ಅಜಯಸಿಂಗ್ ಅವರಿಗೆ ಇದೆ ಎಂದು ಯೋಗೇಶ ಉಮ್ಮರಗಿ ಸಂತಸ ವ್ಯಕ್ತಪಡಿಸಿದ್ದಾರೆ‌. ಶಾಸಕ ಅಜಯಸಿಂಗ್ ಗೆ ಒಲಿದ ಮಂತ್ರಿ ಸ್ಥಾನ : ತಾಳ್ಮೆಗೆ ಸಿಕ್ಕ ಜಯ ಎಂದು ಬೆಂಬಲಿಗರ ಹರ್ಷೋದ್ಘಾರ | ಮಗನ ತಬ್ಬಿಕೊಂಡು ಕಂಬನಿ ಮಿಡಿದ ಅಜಯಸಿಂಗ್ ತಾಯಿ | Dr Ajaysingh got Minister post

Join WhatsApp

Join Now

Join Telegram

Join Now

Leave a Comment