আবহাওয়া আইপিএল-2025 টাকা পয়সা পশ্চিমবঙ্গ ভারত ব্যবসা চাকরি রাশিফল স্বাস্থ্য প্রযুক্তি লাইফস্টাইল শেয়ার বাজার মিউচুয়াল ফান্ড আধ্যাত্মিক অন্যান্য
---Advertisement---

ನೀರಿನ ಮೇಲೆ ಗಂಟೆಗಟ್ಟಲೇ ಯೋಗ ಮೈ ನವಿರೇಳಿಸುವ ಜಲಯೋಗಿಯ ಸಾಹಸ | Hours of yoga on the water

Published on: June 23, 2026
---Advertisement---

ನೀರಿನ ಮೇಲೆ ಗಂಟೆಗಟ್ಟಲೇ ಯೋಗ: ಮೈ ನವಿರೇಳಿಸುವ ಜಲಯೋಗಿಯ ಸಾಹಸ | Hours of yoga on the water | ಯೋಗ ! ನಿನ್ನ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಲೋಕವೆಲ್ಲಾ ಯೋಗಮಯವಾಗಿತ್ತು. ಶಾಲಾ ಮಕ್ಕಳಿಂದ ಹಿಡಿದು ದೊಡ್ಡ ದೊಡ್ಡ ಅಧಿಕಾರಿಗಳು, ರಾಜಕಾರಣಿಗಳು, ಸಾಮಾನ್ಯರು ಯೋಗ ಭಂಗಿಗಳಲ್ಲಿ ಮಿಂಚಿದ್ದೆ ಮಿಂಚಿದ್ದು. ಆದರೆ ಕಲಬುರಗಿಯ ವ್ಯಕ್ತಿಯೊಬ್ಬರ ಯೋಗ ತೀರಾ ವಿಭಿನ್ನ ಮತ್ತು ವಿಷ್ಮಯವಾಗಿ ಗಮನ ಸೆಳೆಯಿತು. ಹಾಗಾದ್ರೆ ಅವರ ಯೋಗದ ವಿಶೇಷತೆ ಏನು ? ಯಾರವರು ? ಎನ್ನುವುದರ ಪೂರ್ಣ ವಿವರ ಈ ವರದಿಯಲ್ಲಿದೆ. ಪೂರ್ತಿ ಓದಿ.

ನಿನ್ನೆ ಜಗವೆಲ್ಲಾ ಯೋಗಮಯವಾಗಿತ್ತು‌. ನೆಲದ ಮೇಲೆ, ಮ್ಯಾಟ್ ಹಾಸಿಕೊಂಡು, ಹುಲ್ಲು ಹಾಸಿಗೆ ಮೇಲೆ, ಮನೆಯ ಮಾಳಿಗೆ ಮೇಲೆ ಹೀಗೆ ಎಲ್ಲೆಂದರಲ್ಲಿ ಯೋಗಸನವೇ ಯೋಗಾಸನಗಳು. ಆದರೆ ಕಲಬುರಗಿ ವ್ಯಕ್ತಿಯೊಬ್ಬರು ವಿಶಾಲವಾದ ಬಾವಿಯಲ್ಲಿ ನೀರಿನ ಮೇಲೆ ಯೋಗಾಸನ ಮಾಡುವ ಮೂಲಕ ರಾಜ್ಯದಲ್ಲಿಯೇ ಗಮನ ಸೆಳೆದಿದ್ದಾರೆ.

ನೀರಿನ ಮೇಲೆ ಗಂಟೆಗಟ್ಟಲೇ ಯೋಗ ಮೈ ನವಿರೇಳಿಸುವ ಜಲಯೋಗಿಯ ಸಾಹಸ | Hours of yoga on the water

ಅವರೇ ಕಲಬುರಗಿ ಹೊರವಲಯದ ನಂದಿಕೂರ ಗ್ರಾಮದ ನಿವಾಸಿ ಪವನಕುಮಾರ ವಳಕೇರಿ.‌ ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಪವನಕುಮಾರ ವಳಕೇರಿ, ನಂದಿಕೂರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸಲ್ಲಿಸಿದ ಸೇವೆ ಜನ ಮರೆಯಲು ಸಾಧ್ಯವೇ ಇಲ್ಲ. ಅವರ ಪತ್ನಿ ಕಲಬುರಗಿ ಜಿಪಂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಆ ಮೂಲಕ ಕಲಬುರಗಿ ರಾಜಕಾರಣದಲ್ಲೂ ಗುರುತಿಸಿಕೊಂಡ ಕುಟುಂಬ ಪವನಕುಮಾರ ವಳಕೇರಿ ಅವರದ್ದು.
ಅವರ ಸಮಾಜ ಸೇವೆ ಒಂದೆಡೆಯಾದರೆ, ಅವರು ಯೋಗಾಸನದ ಮೂಲಕ ರಾಜ್ಯದಲ್ಲಿಯೇ ಗಮನ ಸೆಳೆದಿದ್ದಾರೆ. ಬಹುತೇಕ ಎಲ್ಲರೂ ನೆಲದ ಮೇಲೆ ಯೋಗ ಮಾಡಿದ್ರೆ, ಈ ಪವನಕುಮಾರ ವಳಕೇರಿ ನೀರಿನ ಮೇಲೆ ತೇಲುವ ಮೂಲಕ ಜಲ ಯೋಗ ಮಾಡುತ್ತಾರೆ. ಜಲಯೋಗದಲ್ಲಿ ಪವನಕುಮಾರ ವಳಕೇರಿ ಅವರು ಸಿದ್ದ ಹಸ್ತರು.

ನೀರಿನ ಮೇಲೆ ಯೋಗ

ಯೋಗ ಎನಿಜಕ್ಕೂ ಸಾಧಕರ ಸ್ವತ್ತು. ಸತತ ಸಾಧನೆ ಮಾಡಿದರೆ ಮಾತ್ರ ಯೋಗಸಿದ್ದಿ ಪಡೆಯಲು ಸಾಧ್ಯ. ಆ ರೀತಿ ಯೋಗದಲ್ಲಿ ಸಿದ್ದಿ ಪಡೆದವರು ಪವನಕುಮಾರ ವಳಕೇರಿ. ಕಳೆದ ಇಪ್ಪತ್ತು ವರ್ಷಗಳಿಂದ ಅವರು ನೀರಿನ ಮೇಲೆ ಯೋಗ ಮಢುವುದನ್ನು ರೂಢಿಸಿಕೊಂಡಿದ್ದಾರೆ. ಸಾಮಾನ್ಯರು ನೆಲದ ಮೇಲೆ ಯೋಗದ ಆಸನಗಳನ್ನು ಮಾಡಲು ಬಲು ಕಷ್ಟಪಡುವುದನ್ನು ನೋಡಿದ್ದೇವೆ‌‌. ಆದ್ರೆ ಪವನಕುಮಾರ ವಳಕೇರಿ ಅವರು ನೀರಿನ ಮೇಲೆ ಅಂತಹ ಯೋಗದ ಆಸನಗಳನ್ನೆಲ್ಲಾ ನಿರಾಯಾಸವಾಗಿ ಮಾಡುವ ಮೂಲಕ ಜನ ಹುಬ್ಬೇರಿಸುವಂತೆ ಮಾಡಿದ್ದಾರೆ.

ಎಲ್ಲಾ ಆಸನ ನೀರೀನ ಮೇಲೆ


ಶವಾಸನ, ವಜ್ರಾಸನ, ಪ್ರಾಣಾಯಾಮ ಸೇರಿದಂತೆ ವಿವಿಧ ಆಸನಗಳನ್ನು ಇವರು ನೀರಿನ ಮೇಲೆ ತೇಲುತ್ತಾ ಮಾಡುತ್ತಾರೆ. ಸಾಮಾನ್ಯರು ನೆಲದ ಮೇಲೆ ಮಾಡುವಂತೆ ಇವರು ನೀರಿನ ಮೇಲೆ ತೆಲುತ್ತಲೇ ಎಲ್ಲಾ ಆಸನಗಳನ್ನು ಮಾಡುತ್ತಾರೆ. ಅದೂ ಸಹ ಒಂದೆರಡು ನಿಮಿಷವಲ್ಲ. ಗಂಟೆಗಟ್ಟಲೇ ಸಮಯಯವನ್ನು ಇವರು ನೀರಿನ ಮೇಲೆ ತೇಲಾಡುತ್ತಾ ಯೋಗಾಸನ ಮಾಡುತ್ತಿದ್ದರೆ ನೋಡುವುದೇ ಒಂದು ಸೊಬಗು.

Read this also : ಸ್ಕಾಲರ್ಶಿಪ್ ಗಾಗಿ ಅರ್ಜಿ ಆಹ್ವಾನ-2026 : ಆನ್ ಲೈನ್ ಲಿಂಕ್ ಇಲ್ಲಿದೆ – ತಡ ಮಾಡದೇ ಅರ್ಜಿ ಹಾಕಿ | application invitation for 2026 scholarship

ಅಭ್ಯಾಸ ಬಲ

ಹಾಗಂತ ಇದೆನೋ ಮ್ಯಾಜಿಕ್ ವಿದ್ಯೆ ಅಲ್ಲ. ಕಣ್ತಪ್ಪಿಸೋ ಪ್ರಸಂಗವೂ ಅಲ್ಲ. ಸತತ ಪರಿಶ್ರಮದ ಮೂಲಕ ಈ ವಿದ್ಯೆ ಕರಗತ ಮಾಡಿಕೊಂಡಿರುವ ಶೈಲಿ ಇದು. ಸುಮಾರು ಇಪ್ಪತ್ತು ವರ್ಷಗಳ ಸುದೀರ್ಘ ತಪ್ಪಸ್ಸಿನ ಫಲ ಇದು ಎನ್ನುತ್ತಾರೆ ಜಲ ಯೋಗ‌ಸಾಧಕ ಪವನಕುಮಾರ ವಳಕೇರಿ ಅವರು.

ಆಸಕ್ತರು ಮುಂದೆ ಬಂದರೆ ಕಲಿಸಲೂ ಸಿದ್ದ

ಪವನ್ ಕುಮಾರ ವಳಕೇರಿ ಅವರು ಈ ಜಲಯೋಗ ತಮ್ಮೊಬ್ಬರ ಸ್ವತ್ತಲ್ಲ ಎನ್ನುತ್ತಾರೆ. ಆಸಕ್ತರು ಮುಂದೆ ಬಂದರೆ ಕಲಿಸಲೂ ಸಿದ್ದ ಎನ್ನುತ್ತಾರೆ. ಈ ಜಲಯೋಗ ವನ್ನು ಅವರು ಅವರ ಪುತ್ರನಿಗೆ ಈಗಾಗಲೇ ಧಾರೆ ಎರೆದಿದ್ದಾರೆ. ಅವರ ಪುತ್ರ ಸಹ ತಂದೆಯಂತೆ ಗಂಟೆಗಟ್ಟಲೇ ನೀರಿನಲ್ಲಿಯೇ ತೇಲಾಡುತ್ತಾ ಯೋಗಾಸನ ಮಾಡುವುದರಲ್ಲಿ ಪ್ರವೀಣವಾಗಿದ್ದಾನೆ. ಇದೇ ರೀತಿ ಬೇರೆಯವರಿಗೂ ಕಲಿಸಲು ಸಿದ್ದ ಎನ್ನುವ ಪವನಕುಮಾರ ವಳಕೇರಿ ಮಾತೇ ಅವರ ಜನಪರ ಧೋರಣೆಗೆ ಜೀವಂತ ಸಾಕ್ಷಿಯಾಗಿದೆ.‌

Join WhatsApp

Join Now

Join Telegram

Join Now

পড়তে ভুলবেন না

Leave a Comment