আবহাওয়া আইপিএল-2025 টাকা পয়সা পশ্চিমবঙ্গ ভারত ব্যবসা চাকরি রাশিফল স্বাস্থ্য প্রযুক্তি লাইফস্টাইল শেয়ার বাজার মিউচুয়াল ফান্ড আধ্যাত্মিক অন্যান্য
---Advertisement---

ಅನ್ನ ನೀರಿಲ್ಲದೇ, ಗಾಳಿ ಬೆಳಕಿಲ್ಲದೇ ಕಡಣಿಯಲ್ಲಿ ಕಠಿಣ ಅನುಷ್ಠಾನ | Hard implementation without food and water

Published on: July 22, 2026
Hard implementation without rice and water
---Advertisement---

ಅನ್ನ ನೀರಿಲ್ಲದೇ, ಗಾಳಿ ಬೆಳಕಿಲ್ಲದೇ ಕಡಣಿಯಲ್ಲಿ ಕಠಿಣ ಅನುಷ್ಠಾನ | Hard implementation without food and water

ಕಲಬುರಗಿ ಜು.22:- ಲೋಕಕ್ಕೆ ಕಲ್ಯಾಣವಾಗಲಿ, ಮಳೆ ಬೆಳೆ ಸಮೃದ್ದಿಯಾಗಲಿ ಎಂದು ಪ್ರಾರ್ಥಿಸಿ ಕಲಬುರಗಿ ತಾಲೂಕಿನ ಕಡಣಿ ಗ್ರಾಮದಲ್ಲಿ ಐದು ದಿನಗಳ ಕಠಿಣ ಅನುಷ್ಠಾನ ಶುರುವಾಗಿದೆ.

ಕಲಬುರಗಿ ಜಿಲ್ಲೆ ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ಶ್ರೀ ಗಣಪತಿ ಮಹಾರಾಜರು ಕಳೆದ ಐದು ದಿನಗಳಿಂದ ಕಠಿಣ ಅನುಷ್ಠಾನ ಶುರು ಮಾಡಿದ್ದಾರೆ. ಕಡಣಿ ಗ್ರಾಮದಲ್ಲಿರುವ ಖಂಡೋಬಾ ಮಲ್ಲಯ್ಯ ದೇವಸ್ಥಾನದಲ್ಲಿ ಅನುಷ್ಠಾನ ಆರಂಭಿಸಲಾಗಿದೆ.

ಅನ್ನ ನೀರಿಲ್ಲದೇ, ಗಾಳಿ ಬೆಳಕಿಲ್ಲದೇ ಕಡಣಿಯಲ್ಲಿ ಕಠಿಣ ಅನುಷ್ಠಾನ | Hard implementation without food and water

ಗಣಪತಿ ಮಹಾರಾಜರು ಆರಂಭಿಸಿರುವ ಅನುಷ್ಠಾನ ಅತ್ಯಂತ ಕಠಿಣವಾಗಿದೆ. ಕಡಣಿ ಗ್ರಾಮದ ವ್ಯಾಪ್ತಿಯ ಹೊಲದಲ್ಲಿರುವ ಖಂಡೋಬಾ ಮಲ್ಲಯ್ಯ ದೇವಸ್ಥಾನದ ಕೋಣೆಯೊಳಗೆ ಪ್ರವೇಶಿಸಿ ಅನುಷ್ಠಾನ ಆರಂಭಿಸಿದ್ದಾರೆ. ಅವರು ಒಳ ಪ್ರವೇಶಿಸಿದ ನಂತರ ದೇವಸ್ಥಾನದ ಬಾಗಿಲು, ಕಿಟಕಿ ಸೇರಿದಂತೆ ಗಾಳಿಯಾಡುವ ಎಲ್ಲಾ ದ್ವಾರಗಳನ್ನು ಇಟ್ಟಿಗೆ ಸಿಮೆಂಟ್ ನಿಂದ ಬಂದ್ ಮಾಡಲಾಗಿದೆ. ಜುಲೈ 19 ರಿಂದಲೇ ಅನುಷ್ಠಾನ ಆರಂಭವಾಗಿದೆ‌. ಐದು ದಿನಗಳ ನಂತರ ಬಾಗಲಿಗೆ ಅಡ್ಡಲಾಗಿ ಇಟ್ಟಿಗೆಯಿಂದ ಪ್ಯಾಕ್ ಮಾಡಲಾಗಿರುವ ಗೋಡೆ ತೆರವುಗೊಳಿಸಲು ಭಕ್ತರಿಗೆ ಗಣಪತಿ ಮಹಾರಾಜರು ಸೂಚಿಸಿದ್ದಾರೆ.

ನಿತ್ಯವೂ ನಡೆಯುತ್ತಿದೆ ಪೂಜೆ ಪುರಸ್ಕಾರ, ಭಜನೆ

ಗಣಪತಿ ಮಹಾರಾಜರು ಅನುಷ್ಠಾನ ಆರಂಭಿಸಿದ ದಿನದಿಂದ ದಿನಾಲೂ ಮೂರು ಟೈಮ್ ಪೂಜೆ ನಡೆಯುತ್ತಿದೆ. ಭಕ್ತರು ಭಕ್ತಿ ಭಾವದಿಂದ ನಿತ್ಯ ಮೂರು ಕಾಲ ಪೂಜೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ನಿತ್ಯವೂ ರಾತ್ರಿ ವೇಳೆ ಭಜನೆ, ಡೊಳ್ಳು ನಡೆಯುತ್ತಲೇ ಇದೆ.

Read this also : ನಿರುದ್ಯೋಗಿ ಪದವಿಧರರಿಗೆ ಗುಡ್ ನ್ಯೂಸ್ : 15 ಸಾವಿರ ಶಾಲಾ ಶಿಕ್ಷಕರ ನೇಮಕಕ್ಕೆ ಸಚಿವ ಸಂಪುಟ ಅನುಮೋದನೆ | cabinet approves appointment of 15 thousand teachers

ನಾಳೆ ಬಾಗಿಲು ಓಪನ್

ಗಣಪತಿ ಮಹಾರಾಜರ ಸೂಚನೆಯಂತೆ ನಾಳೆ ದಿನಾಂಕ 23-07-26 ರಂದು ಬೆಳಿಗ್ಗೆ ಪೂಜೆ ಮುಗಿದ ನಂತರ ಬಾಗಲಿಗೆ ಅಡ್ಡಲಾಗಿ ಇಟ್ಟಿಗೆಯಿಂದ ನಿರ್ಮಿಸಲಾಗಿರುವ ಕಟ್ಟಡ ತೆರವುಗೊಳಿಸಲಾಗುತ್ತದೆ. ಆ ಕಟ್ಟಡ ತೆರವುಗೊಳಿಸಿ ಒಳೆಗಡೆಯಿರುವ ಗಣಪತಿ ಮಹಾರಾಜರನ್ನು ಸ್ವಾಗತಿಸಲು ಕಡಣಿ ಗ್ರಾಮದ ಭಕ್ತ ಸಮೂಹ ಜಾತಕ ಪಕ್ಷಿಯಂತೆ ಕಾಯ್ದು ಕುಳಿತಿದ್ದಾರೆ‌.

ಹೊರಗೆ ಬರುತ್ತಿದ್ದಂತೆಯೇ ಜಾತ್ರೆಯ ಸಂಭ್ರಮ

ಐದು ದಿನಗಳ ಕಾಲ ಅನ್ನ ನೀರಿಲ್ಲದೇ, ಗಾಳಿ ಬೆಳಕಿಲ್ಲದೇ ಅತ್ಯಂತ ಕಠಿಣ ಅನುಷ್ಠಾನ ಕೈಗೊಳ್ಳುತ್ತಿರುವುದು ಗಣಪತಿ ಮಹಾರಾಜರ ದೊಡ್ಡ ಪವಾಡ ಎಂದೇ ಭಕ್ತರು ನಂಬಿದ್ದಾರೆ. ಹಾಗಾಗಿ ನಾಳೆ ಗಣಪತಿ ಮಹಾರಾಜರು ಅನುಷ್ಠಾನ ಪೂರ್ಣಗೊಳಿಸಿ ಹೊರ ಬರುತ್ತಿರುವುದನ್ನು ಕಾಣಲು ಜನ ಕುತೂಹಲಭರಿತರಾಗಿದ್ದಾರೆ‌‌. ನಾಳೆ ಅನುಷ್ಢಾನ ಮಂಗಲದ ದಿನ ಅಲ್ಲಿ ಜಾತ್ರೆಯ ಸಂಭ್ರಮ ಇರಲಿದೆ. ವಿಶೇಷ ಪೂಜೆ ಪುರಸ್ಕಾರಗಳ ಜೊತೆಗೆ ಡೊಳ್ಳು ಸೇರಿ ವಾದ್ಯಗಳು ಮೇಳೈಸಲಿವೆ. ನಾಳೆ ಇಡೀ ದಿನ ದಾಸೋಹ ಸೇವೆ ಏರ್ಪಡಿಸಲಾಗಿದೆ‌. ಅನುಷ್ಠಾನ ಮುಗಿಸಿ ಹೊರ ಬರುವ ಗಣಪತಿ ಮಹಾರಾಜರ ಆಶೀರ್ವಾದ ಪಡೆಯಲು, ಅವರ ವಾಣಿ ಕೇಳಲು ಜನ ಕಾತರರಾಗಿದ್ದಾರೆ. ನಾಳೆ ಇದೆಲ್ಲದಕ್ಕೂ ತೆರೆ ಬೀಳಲಿದೆ‌‌.

Join WhatsApp

Join Now

Join Telegram

Join Now

Leave a Comment