আবহাওয়া আইপিএল-2025 টাকা পয়সা পশ্চিমবঙ্গ ভারত ব্যবসা চাকরি রাশিফল স্বাস্থ্য প্রযুক্তি লাইফস্টাইল শেয়ার বাজার মিউচুয়াল ফান্ড আধ্যাত্মিক অন্যান্য
---Advertisement---

ಕೃಷಿ ಪಂಡಿತ ಪ್ರಶಸ್ತಿ ನಿಮ್ಮದಾಗಬೇಕೆ ? ಇಲ್ಲಿದೆ ಮಾಹಿತಿ | Application invitation for krishi pandit Award 2026

Published on: July 8, 2026
Application invitation for krishi pandit Award 2026
---Advertisement---

ಕೃಷಿ ಪಂಡಿತ ಪ್ರಶಸ್ತಿ ನಿಮ್ಮದಾಗಬೇಕೆ ? ಇಲ್ಲಿದೆ ಮಾಹಿತಿ | Application invitation for krishi pandit Award 2026| ಕಲಬುರಗಿ,ಜು.08 : ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ರೈತರಿಗೆ ಕೊಡಮಾಡುವ ಕೃಷಿ ಪಂಡಿತ ಪ್ರಶಸ್ತಿಗೆ ಈ ವರ್ಷಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಕೃಷಿ ಪಂಡಿತ ಪ್ರಶಸ್ತಿ ಈ ಬಾರಿ ನಿಮಗೂ ಸಿಗಬಹುದು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರೆ ಈ ಪ್ರಶಸ್ತಿ ನಿಮಗೆ ಸಿಕ್ಕರೂ ಅಚ್ಚರಿ ಇಲ್ಲ. ಹಾಗಂತ ಪ್ರಶಸ್ತಿ ಸುಮ್ಮನೆ ನಿಮ್ಮನ್ನು ಹುಡುಕಿಕೊಂಡು ಬರಲ್ಲ. ಇದಕ್ಕಾಗಿ ನೀವು ಅರ್ಜಿ ಸಲ್ಲಿಸಬೇಕು. ನಿಮ್ಮ ಸಾಧನೆಯ ವಿವರ ಸರಕಾರಕ್ಕೆ ಅರ್ಜಿಯೊಂದಿಗೆ ಸಲ್ಲಿಸಬೇಕು.‌

2026-27ನೇ ಸಾಲಿನ ಕೃಷಿ ಪ್ರಶಸ್ತಿ ಯೋಜನೆಯಡಿ ಕೃಷಿ ಪಂಡಿತ ಪ್ರಶಸ್ತಿಗಾಗಿ ಆಸಕ್ತಿಯುಳ್ಳ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎನ್ನುವುದನ್ನು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಸಮ್ಮದ್ ಪೇಟೇಲ್ ತಿಳಿಸಿದ್ದಾರೆ.

Application invitation for krishi pandit Award 2026

ಕೃಷಿ ಪಂಡಿತ ಪ್ರಶಸ್ತಿಗಾಗಿ ಕೃಷಿ ಕ್ಷೇತ್ರದಲ್ಲಿ ವಿನೂತನ ಸಾಧನೆ, ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿರುವ ಮತ್ತು ರೈತ ಸಮುದಾಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿರುವವರಾಗಿರಬೇಕು.

Read this also : 215 ಕೋಟಿ ರೂಪಾಯಿ ಬೆಳೆ ವಿಮೆ ಬಿಡುಗಡೆ : ರೈತರ ಸಾಲ ಮನ್ನಾ ಸುಳಿವು ಕೊಟ್ಟ ಸಿಎಂ | Farmers loan waiver ?

ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿಯನ್ನು ಕೆ-ಕಿಸಾನ್ ಪೋರ್ಟಲ್‍ರಡಿ ಆರ್.ಎಸ್.ಕೆ. ಲಾಗಿನ್ (RSK Login) ಅಥವಾ ಸಿಟಿಜನ್ ಲಾಗಿನ್ (Citizen Login) ಮೂಲಕ ಹತ್ತಿರದ ರೈತ ಸಂಪರ್ಕ ಕೇಂದ್ರ/ ನಾಗರಿಕ ಸೇವಾ ಕೇಂದ್ರ/ ಸ್ವತಃ ಆಸಕ್ತ ರೈತ ಮತ್ತು ರೈತ ಮಹಿಳೆಯರು ಪ್ರತ್ಯೇಕವಾಗಿ ಅಗತ್ಯ ದಾಖಲಾತಿಗಳೊಂದಿಗೆ ರೈತರ ಎಫ್‍ಐಡಿ (ಫ್ರೂಟ್ಸ್ ಐಡಿ) FID (FRUITS ID) ಸಂಖ್ಯೆಯನ್ನು ಬಳಸಿಕೊಂಡು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಲ್ಪಿಸಲಾಗಿದೆ.

ಆಸಕ್ತಿಯುಳ್ಳ ರೈತರು ಕೃಷಿ ಪಂಡಿತ ಪ್ರಶಸ್ತಿಯ ಅರ್ಜಿಗಳು ಭರ್ತಿ ಮಾಡಿ ತಮ್ಮ ವ್ಯಾಪ್ತಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ 2026ರ ಆಗಸ್ಟ್ 31 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

Join WhatsApp

Join Now

Join Telegram

Join Now

Leave a Comment