আবহাওয়া আইপিএল-2025 টাকা পয়সা পশ্চিমবঙ্গ ভারত ব্যবসা চাকরি রাশিফল স্বাস্থ্য প্রযুক্তি লাইফস্টাইল শেয়ার বাজার মিউচুয়াল ফান্ড আধ্যাত্মিক অন্যান্য
---Advertisement---

ಅತಿಥಿ ಉಪನ್ಯಾಸಕರ ಆಯ್ಕೆಗೆ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಸುವುದು ಹೇಗೆ ? ಅರ್ಹತೆಗಳೆನು ? | Application for post of guest lecturer

Published on: July 14, 2026
ಅತಿಥಿ ಉಪನ್ಯಾಸಕರ ಆಯ್ಕೆಗೆ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಸುವುದು ಹೇಗೆ ? ಅರ್ಹತೆಗಳೆನು ? | Application for post of guest lecturer
---Advertisement---

ಅತಿಥಿ ಉಪನ್ಯಾಸಕರ ಆಯ್ಕೆಗೆ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಸುವುದು ಹೇಗೆ ? ಅರ್ಹತೆಗಳೆನು ? | Application for post of guest lecturer |

ಬೆಂಗಳೂರು, ಜುಲೈ ‌13 : ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (ಸರ್ಕಾರಿ ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳು ಒಳಗೊಂಡಂತೆ) 2026-27ನೇ ಶೈಕ್ಷಣಿಕ ಸಾಲಿಗೆ ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಬೋಧನಾ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರನ್ನು (ಅತಿಥಿ ಗ್ರಂಥಪಾಲಕರು ಹಾಗೂ ಅತಿಥಿ ದೈಹಿಕ ಶಿಕ್ಷಣ ನಿರ್ದೇಶಕರು ಒಳಗೊಂಡಂತೆ) ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ನಿಗದಿತ ವೇಳಾಪಟ್ಟಿಯೊಳಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು / ತಿದ್ದುಪಡಿ (EDIT) ಮಾಡಲು ಪ್ರಾರಂಭದ ದಿನಾಂಕ: 11.07.2026,

Application for post of guest lecturer

ಅರ್ಜಿ ಸಲ್ಲಿಸಲು / ತಿದ್ದುಪಡಿ ಮಾಡಲು ಕೊನೆಯ ದಿನಾಂಕ: 18.07.2026,

ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸುವ ದಿನಾಂಕ: 19.07.2026,

ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸಿದ ನಂತರ ಅರ್ಜಿಯನ್ನು EDIT ಮಾಡಲು ಅವಕಾಶ: 19.07.2026 ರಿಂದ 22.07.2026,

ತಾತ್ಕಾಲಿಕ ಕಾರ್ಯಭಾರ (Workload) ಪ್ರಕಟಿಸುವ ದಿನಾಂಕ: 25.07.2026

ಕೌನ್ಸಿಲಿಂಗ್ ಮೆರಿಟ್ ಪಟ್ಟಿ ಹಾಗೂ ಕಾರ್ಯಭಾರ ಪ್ರಕಟಿಸುವ ದಿನಾಂಕ: 26.07.2026

ಮೆರಿಟ್ ಪಟ್ಟಿಯನ್ವಯ ಕಾಲೇಜು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ: 28.07.2026

ವಿದ್ಯಾರ್ಹತೆ ಮತ್ತು ಆಯ್ಕೆ ಮಾನದಂಡಗಳು

ಯುಜಿಸಿ 2018ರ ಮಾರ್ಗಸೂಚಿಗಳನ್ವಯ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಶೇ.55 ಅಂಕಗಳನ್ನು (ಎಸ್‌ಸಿ/ಎಸ್ ಟಿ/ಓಬಿಸಿ/ವಿಶೇಷ ಚೇತನರಿಗೆ ಶೇ.50) ಹೊಂದಿರಬೇಕು. ಇದರೊಂದಿಗೆ ಎನ್‌ಇಟಿ / ಎಸ್‌ಎಲ್‌ಇಟಿ / ಕೆ.ಸೆಟ್ / ಪಿಹೆಚ್.ಡಿ ವಿದ್ಯಾರ್ಹತೆ ಹೊಂದಿರುವುದು ಕಡ್ಡಾಯ.

ಮೆರಿಟ್ ಅಂಕಗಳ ಹಂಚಿಕೆ (ಒಟ್ಟು 100 ಅಂಕಗಳು)

​ಸ್ನಾತಕೋತ್ತರ ಪದವಿ ಅಂಕಗಳು: ಅಭ್ಯರ್ಥಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ 25% ಭಾಗವನ್ನು ಪರಿಗಣಿಸಲಾಗುವುದು (ಗರಿಷ್ಠ 25 ಅಂಕಗಳು).

​ಹೆಚ್ಚುವರಿ ವಿದ್ಯಾರ್ಹತೆ: ಪಿಹೆಚ್.ಡಿ ಹೊಂದಿದ್ದಲ್ಲಿ 12 ಅಂಕಗಳು; ಎನ್‌ಇಟಿ/ಕೆ-ಸೆಟ್/ಎಸ್‌ಎಲ್‌ಇಟಿ ಹೊಂದಿದ್ದಲ್ಲಿ 09 ಅಂಕಗಳು; ಎಂ.ಫಿಲ್ ಹೊಂದಿದ್ದಲ್ಲಿ 06 ಅಂಕಗಳು.

​ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ಪ್ರತಿ ಶೈಕ್ಷಣಿಕ ವರ್ಷಕ್ಕೆ 3 ಅಂಕಗಳಂತೆ ಗರಿಷ್ಠ 48 ಅಂಕಗಳನ್ನು (ಮಿತಿ 16 ವರ್ಷಗಳು) ನೀಡಲಾಗುವುದು.

ಅರ್ಹ ವಿಕಲಚೇತನ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ 10 ಅಂಕಗಳನ್ನು ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು

2025-26 ನೇ ಸಾಲಿಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಆದರೆ, ತಮ್ಮ ಅರ್ಜಿಯಲ್ಲಿನ ಮಾಹಿತಿಯನ್ನು ತಿದ್ದುಪಡಿ ಮಾಡಲು ಅವಕಾಶವಿರುತ್ತದೆ.

Read this also : Three friends died in th accident|ಬೈಕ್ ಪಲ್ಟಿ ಪ್ರಾಣ ಬಿಟ್ಟ ಮೂವರು ಪ್ರಾಣ ಸ್ನೇಹಿತರು

ಕರ್ನಾಟಕ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸಲ್ಲಿಸಿದ ಸೇವೆಯನ್ನು ಮಾತ್ರ ಪರಿಗಣಿಸಲಾಗುವುದು. ಖಾಸಗಿ ಕಾಲೇಜು ಅಥವಾ ವಿಶ್ವವಿದ್ಯಾಲಯಗಳಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸುವುದಿಲ್ಲ.

ಸಾಮಾನ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು- https://emis.karnataka.gov.in/application.aspx ಮತ್ತು ಸರ್ಕಾರಿ ಚಿತ್ರಕಲಾ / ಸಂಸ್ಕೃತ ಕಾಲೇಜುಗಳು – https://emis.karnataka.gov.in/AppSFC.aspx ಲಿಂಕ್ ಗಳ ಮೂಲಕ ಅನ್ ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.

​ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದ್ದಲ್ಲಿ ಅಭ್ಯರ್ಥಿತನವನ್ನು ತಿರಸ್ಕರಿಸಲಾಗುವುದು. ಒಂದು ವೇಳೆ ಹಾಜರುಪಡಿಸಿದ ದಾಖಲೆಗಳು ನಕಲಿ ಎಂದು ಕಂಡುಬಂದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.

ಆಯ್ಕೆಯಾಗಿ ಕರ್ತವ್ಯಕ್ಕೆ ಹಾಜರಾದ ನಂತರ ಪ್ರಸೂತಿ ರಜೆ ಮೇಲೆ ತೆರಳುವ ಮಹಿಳಾ ಅತಿಥಿ ಉಪನ್ಯಾಸಕಿಯರಿಗೆ 90 ದಿನಗಳ ವೇತನ ಸಹಿತ ಮಾತೃತ್ವ ರಜೆಯ ಸೌಲಭ್ಯವನ್ನು ನೀಡಲಾಗುತ್ತದೆ.

*​ಹೆಚ್ಚಿನ ವಿವರಗಳಿಗಾಗಿ* ಇಲಾಖೆಯ ಅಧಿಕೃತ ವೆಬ್‌ಸೈಟ್ https://dce.karnataka.gov.in ಅನ್ನು ಪ್ರತಿ ನಿತ್ಯ ಗಮನಿಸುವಂತೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರು, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join WhatsApp

Join Now

Join Telegram

Join Now

Leave a Comment